ಗಡೀಪಾರು: ಕಣ್ನೋಟ
ನೋವಿನ ಭೂತಗಳು
ಜರಕೊಂಡಿವೆ ನೆನಪಿನ ನೆರಳುಗಳಲ್ಲಿ
ಮೂಕ ಗೋಡೆಗಳ ಮೇಲೆ ಪ್ರತ್ಯೇಕ ನೀತಿಕತೆಗಳು
ಪ್ರತಿ ಗೋಡೆಯ ಮೇಲೂ ಒಂದು ಅಗ್ನಿಪರೀಕ್ಷೆ
ತಲೆಮರಕ ದನಿಗಳ ಜಖಮಾದ ಆಲೋಚನೆಗಳು
ಗಡೀಪಾರಾದ ನೋಟದಲಿ
ಗಾಢ ಮೌನ
ನುಡಿಯಬರದ ಮಾತುಗಳು
ಬೆದರುಬೊಂಬೆಯಿಲ್ಲದ ಸೃಷ್ಟಿಕರ್ತ
ಗಬ್ಬೆಬ್ಬಿಸಿದ ಜೀವಗಳು
ಮಾಫಿ ಕೇಳುವುದಿಲ್ಲ ಆತ ತನ್ನ ಅಪರಾಧಗಳಿಗೆ
ಮನದಾಳ:
ಬಾಂದಳದ ಕೆಳಗಿನ ಹಾಯಿಗಳು
ಎತ್ತ ಸಾಗುವುವು?
ಎತ್ತಿ ಹಿಡಿಯಲು ನೆರವಿನವರೊ
ಅಥವಾ ಗಾಳಿ ರಾಚಿದ ಮಳೆಯೊ?
ಮನಸು ಮುಳುಗುತಿದೆ ಇರುಳಲ್ಲಿ
ತರ್ಕದ ಪತರಗುಡುವಿಕೆ ನಿಲ್ಲುವವರೆಗೆ
Glance of exile
The spirit of pains
Startling in shadows of memories
The isolated allegory on speechless walls
Each wall filled with ordeal
Wounded consideration
Of evasive voices
And in the glance of exile
Deep silence
Words unspoken
Lives destroyed by a Creator without effigy
Who creates and afterwards gives up
He doesn’t plead for his offence
Ceaseless sorrow prevails
Hollowing out in the mind:
Where do sails go below the horizon?
To be erected by the relief
Or the rain blown by the wind?
The mind engulfed in darkness
Up till logic stops vibrating.
ಹಗಲು ದೌಡಿಕ್ಕುವುದು
ಇರುಳು ಹಿಂಬಾಲಿಸವುದು
ಬದುಕೂ ಪರಾರಿಯಾಗುವುದು
ಕಾಲಪ್ರವಾಹದ ಮೇಲೆ
ಕಣ್ಣೆವೆ ಮುಚ್ಚುವುದರೊಳಗೆ
ಋತುಗಳೂ ಮಾಯ
ಸದ್ದಿರದೆ ಜಾರಿಹೋಗುವುವು
ಒಬ್ಟೊಂಟಿತನ, ನೋವುಗಳ
ನೀಳ ಆಯುಷ್ಯಗಳು
ಸುಖದ ಕೆಲವೇ ನಿಮಿಷಗಳು
ಗತ: ಏಕತಾನತೆಯ ಜೀವಗಳು
ವರ್ತಮಾನ:ನಶ್ವರ ನಿರ್ಮಿತಿಗಳು
ಭ್ರಮೆಗಳ ಭವ್ಯ ಭವಿಷ್ಯಗಳು
ಎತ್ತ ಸಾಗುತ್ತಿದ್ದೀರಿ?
ಹೇಗೆ ರೂಪಿಸುತ್ತಿದ್ದೀರಿ ನನ್ನನ್ನು?
ಹೊರಗಣ ಆಯಾಸ
ಆಕಸ್ಮಿಕಗಳ ಆಟ
ಆಸೆಗಳ ಎಡವಟ್ಟು
ಗೋಡೆಗಳಿಂದ ಖಾಲಿ ಶಬ್ದಗಳ ಮಾರ್ದನಿಗಳು
ಅಸಾಧ್ಯವಾದುದೆಲ್ಲ ಅನೂಹ್ಯ
The day rushes by
And the night follows it
Existence flies too
Carried by the flow of time
The seasons flee in the blink of an eye
And slip away noiselessly
Endless span
Of painful loneliness
And some seconds of joy
The past, of monotonous lives
The present, of ephemeral works
The future of awesome fiction
Where are you heading on?
How are you shaping me?
The weariness of outer appearance
To follow the game of chance
The blunders of desires
Only words echo
Against the wall
The impossible is conceivable.
ಮಾನವೀಕಗಳು
ಕಾತುರ, ಬವಣೆ, ಆಸೆಗಳು
ಮನದಾಳದಲ್ಲಿ ವಿಚಾರಗಳ ಪರಿಕಿಸುವಾಗ
ಮನವ ಹಿಂಬಾಲಿಸುವುವು
ಜ್ಞಾನೋದಯದ ವಿಚಾರಗಳು
ನಿರುಪಯೋಗಿ ವಿಚಾರಗಳು
ಎಷ್ಟು ಸಲ ಮುಳುಗಿಹೋಗುವುದು
ಅಚ್ಚರಿಗೊಳ್ಳುವುದು, ಸಿಡುಕುವುದು
ಬೆಳಕಿರದ ಮಾನವೀಕಗಳಲ್ಲಿ
ಗುರಿಯಿರದೆ ಪಯಣಿಸುವುದು
ಅಲ್ಲೇ ಇದೆ
ಎದುರುಬದುರಾಗಿ
ಏಕಾಕಿತನದಲ್ಲಿ ನಡೆವ ಸಂವಾದಗಳು
ಅದನನುಸರಿಸುತ್ತಾ ಅರಿವೆಗಳಚಿ
ಬರಿಮೈಯಾಗುವುದು
ಅಸಹ್ಯದ ತೋರಿಕೆಗಳು
ಇನಿವಿಚಾರಗಳ ಪಿಸುವಾತುಗಳು
ಮನಸ ಹಾಯುವ ನಿಗೂಢ ಮಟ್ಟುಗಳು
ಕಣ್ಮುಚ್ಚು ಎಂಬ ಅಂತರಾಳದಾಣತಿಗಳು
ಮುಂದೆಲ್ಲಿಗೆ ಎಂಬ ಸುಳುಹುಗಳು
The Humanities
Anxiety, agony and hope
Examining the idea within the inner self
An enlightened idea, an insignificant idea
That follows the mind
To be immersed so many times
To be amazed, to be furious
Travelling aimlessly through the Humanities
In the absence of light
It is there, face to face
A dialogue goes on in solitude
Observing it
And ending up stripped unveiled
Nasty appearances
Whisper of melodious ideas
And furtive tunes crossing the mind
An inner call to close the eyes
And sense
Where to travel.
ಇನ್ನೂ ಶಬ್ದಗಳು
ಶಬ್ದಗಳು.. ಶಬ್ದಗಳು
ಶ್ರಧ್ಧೆಯ ಶಬ್ದಗಳು
ಬಯಕೆಯ ಶಬ್ದಗಳು
ಮನಸಿನ ಶಬ್ದಗಳು
ಬಂಡುಕೋರ ಶಬ್ದಗಳು
ಕಳೆದುಹೋಗಿ ಮರಳಿ ದೊರಕಿದ ಶಬ್ದಗಳು
ಮುಗ್ಧ ಶಬ್ದಗಳು
ಚಲುವ ಸ್ವರ್ಗದ ಹಾಗೆ
ಕಹಿಕಹಿ ಶಬ್ದಗಳು
ಪ್ರಕೃತಿ ವಿಕೋಪದ ಬದಿಯ
ಕ್ರುಧ್ಧ ಶಬ್ದಗಳು
ಗುನುಗಿದ ಶಬ್ದಗಳು
ಆರ್ಭಟದ ಶಬ್ದಗಳು
ಸಂಜೆಗೂ ಮೊದಲು ಮೊಳಗುವ
ಗಾಳಿ ಶಬ್ದಗಳು
ಇತಿಹಾಸದ ಶಬ್ದಗಳು
ಇನ್ನೂ ಶಬ್ದಗಳು
ವಿದಾಯದ ಶಬ್ದಗಳು
ಕ್ಷಮಾಯಾಚನೆಯ ಶಬ್ದಗಳು
ಮನುಜ ಜೀವನದ ಅಣುವಿನೊಳಗಣ
ಶಬ್ದಗಳು
ಈ ವರವಿಲ್ಲದಿದ್ದರೆ
ಗುನುಗಲಾಗುತಿರಲಿಲ್ಲ ಮನುಕುಲಕೆ
ನುಡಿಯಲಾಗುತಿರಲಿಲ್ಲ ಬುಧ್ಧಿಗೆ
ಬುಧ್ಧಿ ಹೇಳಲಾಗುತಿರಲಿಲ್ಲ
ಎಲ್ಲಕ್ಕೂ ಮುಖ್ಯ
ಪ್ರೀತಿಸಲೂ ಆಗುತ್ತಿರಲಿಲ್ಲ
More words
Words …words
Words of devotion
Words of aspiration
Mental words
Rebellious words
Lost and found
Innocent words
Like the comely heavens
Bitter words
Frightening words
Nearing a disaster
Hummed words
Howled words
Words on air
that are lost at dusk
Words from History
But again more words
Parting words
Apologetic words
Words even from atoms
of human life
Without this boon
Humankind cannot
Hum or head
Express itself or edify
And particularly love
Words…
ಧ್ವನಿ
ಸೋತ ನಾಲಗೆ
ಮರೆತ ನೆನಪುಗಳ ತಂಗಳಲಿ ಅಗೆಯುವುದು
ಹೂದಿಗಳಿಂದ ಹೊರಟ
ಮಾತುಮೀರಿದ ಸಂಸ್ಕರಿತ ಕಣಸುಗಳು
ಬಿಡುಗಡೆ ಪಡಕೊಂಡು ವಿಧಿಯಿಂದ
ಮೂಲದಾಚೆಗೆ ಹಾರುವುದು
ಅಕ್ಷಯ ಭಾವಗಳಿಂದ
ಕಾಲ ಲಯದನುಸಾರ ಕುಣಿಯುವುದು
ಹೊಸ ಹಾದಿ ಖಂಡಿತವಾಗಿ
ಅದೃಶ್ಯ, ವಿನಾಶಕ ಶೂನ್ಯಗಳಲ್ಲಿ
ನರಳಾಟವಿರದ
ಪತನಕ್ಕನುವುಮಾಡುವ ರಂಗುಗಳಿರದೆ
ಭಯಭೀತ ಗ್ರಾಹ್ಯವನು ಅಡಗಿಸಿ
ಕಳೆದು ಹೋಗುವುದು ಚಕ್ರವ್ಯೂಹಗಳಲ್ಲಿ
ಮುಳುಗಿ ಮೌನದ ಕೊನೆಯಿರದ ಕಾವಲ್ಲಿ
ವಸಂತ ಮಣದಾನಿಲವ ಸೂಚಿಸುವುದು
ಸೂರ್ಯ ಬಿಂಬಗಳಿಂದ ಬೆಚ್ಚಗಾದ ತುಟಿಗಳು
ಮಾಗಿ ಥಂಡಿಗೆ ಸಿಡುಕುವುವು
ಶಾಂತಿಯ ತುಂಡುಗಳ ಕೂಡಿಸುವುದು
ಮತ್ತೆ ಪಡಕೊಳ್ಳುವುದು ದನಿಯ ಸಮತೋಲವನ್ನು
The voice
The tongue defeated
It digs deep in the remains of forgotten memories
A vision sets up from the ashes
Speechless and refined
It is freed from fate
It flies beyond the essence
It dances at the rhythm of time
With an inexhaustible feeling
A path broken
By the destructive void
Invisible
Without any turmoil and without colour
That leads to degradation
By concealing the frightened tangible
And lost in the labyrinth
Engulfed by the endless fire of silence
It hints at me the spring breeze that blows
Lips warmed by the reflections of the sun
Irritated by the coldness of winter
It glues fragments of peace
It wins again the harmonious equilibrium
of the voice.
English Translation Shiva Prakash
One comment on “HAMID LARBI”
Pingback:
les poèmes traduits en langue Tamil (INDE) par le poète Shiva Prakash -